ವಿಧಾನಸೌಧ
ಕರ್ನಾಟಕ ವಿಧಾನ ಮಂಡಲದ ಕೇಂದ್ರವಾದ ವಿಧಾನಸೌಧ
ವು ಇಂಡೋ-ಸಾರ್ಸೆನಿಕ್, ರಾಜಾಸ್ತಾನೀ ಜರೋಕಾ ಮತ್ತು ದ್ರಾವಿಡ ಶೈಲಿಗಳ ಬ್ರಹತ್ ಕಟ್ಟಡವನ್ನು ಹೊಂದಿದೆ. ಇವೆಲ್ಲ ಶೈಲಿಗಳನ್ನು ಒಗ್ಗೂಡಿಸಿ ಒಮ್ಮೂಮ್ಮೆ ನವದ್ರಾವಿಡ ಶಿಲ್ಪ ಎಂದು ಕರೆಯಲಾಗುತ್ತದೆ.
1951ರಿಂದ 1956ರವರೆಗೆ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ಯುರೋಪ್, ರಷ್ಯಾ, ಅಮೇರಿಕ ಮುಂತಾದ ದೇಶಗಳನ್ನು ಭೇಟಿ ಮಾಡಿದಾಗ ವಿಧಾನಸೌಧದ ಕಲ್ಪನ್ವೆಯನ್ನು ರೂಪಿಸಿಕೊಂಡರು. ಅಂದಿನ ಪ್ರಧಾನಮಂತ್ರಿ ಜವಹರಲಾಲ್ ನೆಹರೂರವರು 1951ರ ಜುಲೈ 13ರಂದು ಶಿಲಾನ್ಯಾಸ ಮಾಡಿದರು.ಕಟ್ಟಡ ನಿರ್ಮಾಣವು 1956ರಲ್ಲಿ ಪೂರ್ಣವಾಯಿತು.
ವಿಧಾನಸೌದವು 4 ಅಂತಸ್ತುಗಳನ್ನು ಮತ್ತು 1 ನೆಲಮನೆಯನ್ನು ಹೊಂದಿದೆ. ಇದರ ವಿಸ್ತೀರ್ಣ 700ಘಿ350 ಚದರಡಿ. ಇದು ಭಾರತದಲ್ಲೇ ಅತ್ಯಂತ ದೊಡ್ಡ ವಿಧಾನಮಂಡಲ ಕಟ್ಟಡ ಇದರ ಪೂರ್ವಭಾಗವು ತಲಾ 40 ಅಡಿ ಎತ್ತರದ 12 ಶಿಲಾಸ್ತಂಭಗಳ ಮೊಗಸಾಲೆ ಹೊಂದಿದೆ.ಇದಕ್ಕೆ 200 ಅಡಿ ಅಗಲದ 45 ಮೆಟ್ಟಿಲುಗಳನ್ನು ಹತ್ತಬೇಕು.ಕಟ್ಟಡದ ಮಧ್ಯದಲ್ಲಿನ ಗೋಪುರವು 60 ಅಡಿ ವ್ಯಾಸ ಹೊಂದಿದೆ. ಇದರ ಮೇಲೆ ರಾಷ್ಟ್ರೀಯ ಲಾಂಛನ 4 ಸಿಂಹ ಮತ್ತು ಅಶೋಕ ಚಕ್ರವಿದೆ.
ಇದರ ನಿರ್ಮಾಣಕ್ಕೆ ವೆಚ್ಚ 1 ಕೋಟಿ 75 ಲಕ್ಷ ರೂಪಾಯಿಗಳು. ಆದರೆ ಈಗ ಕಟ್ಟಡದ ವಾರ್ಷಿಕ ಉಸ್ತುವಾರಿಗೆ 2 ಕೋಟಿ ರೂಪಾಯಿಗಳು. ಭಾನುವಾರ ಹಾಗೂ ರಜಾದಿನಗಳಂದು ಕಟ್ಟಡಕ್ಕೆ ವಿಶೇಷ ಬೆಳಕು ವಿನ್ಯಾಸವಿರುತ್ತದೆ. ವಿಧಾನಸೌದದ ಎದುರಿಗೆ ಬೆಂಗಳೂರಿನ ಮತ್ತೊಂದು ಸುಂದರ ಕಟ್ಟಡವಾದ ರಾಜ್ಯ ಶ್ರೇಷ್ಠ ನ್ಯಾಯಾಲಯವಿದೆ. ಇವೆರಡೂ ಕಟ್ಟಡಗಳ ಉದ್ಯಾನವನಗಳು ಕಬ್ಬನ್ ಪಾರ್ಕ್ ವ್ಯಾಪ್ತಿಗೆ ಒಳಪಟ್ಟಿವೆ.
|