PRINTE-mail
 
 


ಅನಿವಾಸಿ ಕನ್ನಡಿಗರ ಕೇಂದ್ರದ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

  • ಅನಿವಾಸಿ ಕನ್ನಡಿಗರ ಕೇಂದ್ರ ಎಂದರೇನು?
    ಇದು ರಾಜ್ಯ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕರ್ನಾಟಕ ಉದ್ಯೊಗ ಮಿತ್ರ ವಿಭಾಗದ ಒಂದು ಅಂಗ.
  • ಅನಿವಾಸಿ ಕನ್ನಡಿಗರ ಕೇಂದ್ರದ ಉದ್ಡೇಶವೇನು?
    ಇದು ಎಲ್ಲಾ ಅನಿವಾಸಿ ಕನ್ನಡಿಗರಲ್ಲಿ ಹಾಗು ಕರ್ನಾಟಕ ಸಂಜಾತರಲ್ಲಿ ಪರಸ್ಪರ ಸಂಪರ್ಕವನ್ನು ವೃದ್ದಿಸುವ ಆಶಯವನ್ನು ಹೊಂದಿದೆ ಹಾಗೂ ಕರ್ನಾಟಕದಲ್ಲಿ ಬಂಡವಾಳ ಹೊಡಿಕೆಗೆ ಸಹಾಯ ಹಸ್ತ ನೀಡುವುದು.
  • ಅನಿವಾಸಿ ಕನ್ನಡಿಗರ ಕೇಂದ್ರಕ್ಕೆ ಯಾರು ಸದಸ್ಯರಾಗಬಹುದು?
    ಕರ್ನಾಟಕದ ಸರ್ವಾಂಗೀಣ ಅಭಿವೃದ್ದಿಯಲ್ಲಿ ಹಾಗು ಕರ್ನಾಟಕದ ಬಗ್ಗೆ ತಿಳಿವಳಿಕೆ ಪ್ರಸರಿಸುವ ಬಯಸುವ ಯಾರೇ ಅನಿವಾಸಿ ಕನ್ನಡಿಗ ಅಥವ ಕರ್ನಾಟಕ ಸಂಜಾತ ಇದರ ಸದಸ್ಯನಾಗಿ ನೊಂದಣಿ ಹೊಂದಬಹುದು
  • ಸದಸ್ಯತ್ವ ಶುಲ್ಕವೇನು?
    ಸದಸ್ಯತ್ವಕ್ಕೆ ಶುಲ್ಕವಿಲ್ಲ ಆದರೆ ಕೋರಿಕೆಯ ಮೇಲಿನ ನಿರ್ದಿಷ್ಟ ಸೇವೆಗೆ ಶುಲ್ಕ ವಿಧಿಸಬಹದು.
  • ಅನಿವಾಸಿ ಕನ್ನಡಿಗರ ಕೇಂದ್ರವು ಕರ್ನಾಟಕ ಸಂಜಾತರ ಪ್ರವಾಸಗಳಿಗೆ ವ್ಯವಸ್ಥೆ ಮಾಡಿಕೊಡುತ್ತದೆಯೇ?
    ಈ ಕೇಂದ್ರವು ನೇರವಾಗಿ ಅಂತಹ ವ್ಯವಸ್ಥೆ ಮಾಡುವುದಿಲ್ಲ.ಆದೆರೆ ಉದ್ಡೇಶಿತ ಪ್ರವಾಸಿಯು ತನ್ನ ಆಸಕ್ತಿಯ ಸ್ಥಳಗಳಿಗೆ ಪ್ರವಾಸ ಮತ್ತಿತರ ವಿಷಯಗಳ ಬಗ್ಗೆ ಎಲ್ಲಾ ವಿವರಗಳನ್ನು ಅನಿವಾಸಿ ಕನ್ನಡಿಗರ ಕೇಂದ್ರದ ಅಂತರ್ಜಾಲದ ನಾನಾ ಶೀರ್ಷಿಕೆ ಪಡೆಯಬಹುದು. ವಿಶೇಷ ತೊಂದರೆಗಳಿದ್ದಲ್ಲಿ ಅನಿವಾಸಿ ಕನ್ನಡಿಗರ ಕೇಂದ್ರವು ಖಂಡಿತವಾಗಿಯು ಸಹಾಯ ಹಸ್ತ ಚಾಚುವುದು..
  • ಇದು ಜನ ಸೇವೆಯೂ ಉದ್ದೇಶ ಹೊಂದಿದೆಯೇ?
    ಕರ್ನಾಟಕ ಉದ್ಯೊಗ ಮಿತ್ರದ ಒಂದು ಅಂಗವಾಗಿ ಅನಿವಾಸಿ ಕನ್ನಡಿಗರ ಕೇಂದ್ರವು ಎನ್.ಆರ್.ಐ ಮತ್ತು ಪಿ.ಕೆ.ಒ. ಗಳಿಂದ ಹೆಚ್ಚು ಹೊಡಿಕೆಯನ್ನು ಆಕರ್ಷಿಸುವ ಮುಖ್ಯ ಉದ್ದೇಶ ಹೊಂದಿದೆ.ಅದು ಒಂದು ವಿಧದಲ್ಲಿ ಜನ ಸೇವೆಯೊ ಹೌದು.
  • ಕರ್ನಾಟಕ ಉದ್ಯೊಗ ಮಿತ್ರ ಇರುವಾಗ ಪ್ರತ್ಯೆಕವಾಗಿ ಕೆ.ಡಿ.ಸಿ ಅಗತ್ಯವಾಗಿದೆಯೇ?
    ಇದಕ್ಕೆ ಉತ್ತರ ಪ್ರಶ್ನೆಯಲ್ಲಿಯೇ ಅಡಗಿದೆ.ಕರ್ನಾಟಕ ಉದ್ಯೋಗ ಮಿತ್ರದ ವ್ಯಾಪ್ತಿಯಲ್ಲಿ ಕನಾಟಕದಲ್ಲಿ ಹೊಡಿಕೆ ಮಾಡುವವರು ಯಾರೇ ಆದರೂ ಸೇರಿರುತ್ತಾರೆ.ಆದರೆ ಕೆ.ಡಿ.ಸಿ. ನಿರ್ದಿಷ್ಟ ಗುರಿಯನ್ನು ಹೊಂದಿರುತ್ತದೆ. ಇದು ಎನ್.ಆರ್.ಐ ಮತ್ತು ಪಿ.ಕೆ.ಓ.ಗಳ ಪರಸ್ಪರ ಸಂಪರ್ಕಕ್ಕೆ ಸಹಾಯ ಮಾಡಿ ಅವರ ಆಸಕ್ತಿಯ ವಿಷಯಗಳನ್ನು ನಿರ್ದಿಷ್ಟವಾಗಿ ಗುರುತಿಸಲು ನೆರವಾಗುತ್ತದೆ.ಇದು ಕರ್ನಾಟಕದಲ್ಲಿ ಹೂಡಿಕೆ ಮಾಡಬಯಸುವ ಎಲ್ಲಾ ಎನ್.ಆರ್.ಐ. ಮತ್ತು ಪಿ.ಕೆ.ಓ ಗಳಿಗೆ ಒಂದು ಗವಾಕ್ಷಿಯಾಗಿದೆ.
  • ಅಂದರೆ ಇದಕ್ಕೆ ಕೇವಲ ಹೊಡಿಕೆಯಲ್ಲಿ ಮಾತ್ರ ಆಸಕ್ತಿಯೇ?
    ಅಲ್ಲ.ನಮ್ಮ ಅಂತರ್ಜಾಲದತ್ತ ಒಮ್ಮೆ ಕಣ್ಣು ಹಾಯಿಸಿದಲ್ಲಿ ಕೆ.ಡಿ.ಸಿ ಯು ಎನ್.ಆರ್.ಐ ಮತ್ತು ಪಿ.ಕೆ.ಓ ಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ಜೀವನ ಮತ್ತು ಸಂಸ್ಕೃತಿ ಎಲ್ಲಾ ವಿಭಾಗಗಳ ಬಗ್ಗೆಯೂ ಆಸಕ್ತಿ ಹೊಂದಿದೆ ಎಂಬುದು ಮನದಟ್ಟಾಗುತ್ತದೆ.
  • ಇದು ಎನ್.ಆರ್.ಐ ಮತ್ತು ಪಿ.ಕೆ.ಓ ಗಳಿಗೆ ಕರ್ನಾಟಕದಲ್ಲಿ ಹೊಡಿಕೆ ಮಾಡುವ ಬಗ್ಗೆ ಎಷ್ಟರಮಟ್ಟಿಗೆ ತನ್ನನ್ನು ತೊಡಗಿಸಿಕೊಳ್ಳುತ್ತದೆ?ಇದು ಅವರಿಗೆ ಭೂಮಿ,ಬ್ಯಾಂಕ್ ಮುಂತಾದವನ್ನು ಒದಗಿಸಿಕೊಡಲು ಮುಂದಾಗುತ್ತದೆಯೇ?
    ಕರ್ನಾಟಕ ಉದ್ಯೋಗ ಮಿತ್ರದ ಮುಖಾಂತರ ಕೈಗಾರಿಕೆ ಸ್ಥಾಪಿಸಲು ಅಗತ್ಯ ಮೂಲಭೂತ ಸೌಕರ್ಯಗಳಾದ ಭೂಮಿ,ನೀರು,ವಿದ್ಯುತ್ತ್ ಇತ್ಯಾದಿಗಳನ್ನು ಸಂಬಂಧಿಸಿದ ಸಂಸ್ಥೆಗಳ ಮುಖಾಂತರ ಒದಗಿಸಿಕೊಡುತ್ತದೆ.
  • ಕೆ.ಡಿ.ಸಿ. ಜೊತೆ ನಮ್ಮ ಪರಸ್ಪರ ಪ್ರತಿಕ್ರಿಯೆಯು ಎಷ್ಟರ ಮಟ್ಟಿಗೆ ರಹಸ್ಯವಾಗಿರುತ್ತದೆ?
    ನಿಮ್ಮ ಬ್ಯಾಂಕ್ ವ್ಯವಹಾರದಷ್ಟೇ ರಹಸ್ಯವಾಗಿರುತ್ತದೆ.ಇದು ಏಕಮನಸ್ಕರು ಪರಸ್ಪರ ಸಂಪರ್ಕ ಹೊಂದಲು ನೆರವಾಗುತ್ತದೆ.